== ವಿಟಮಿನ್ ಸೊಪ್ಪಿನ ಬಗ್ಗೆ == ವಿಟಮಿನ್ ಸೊಪ್ಪು, ಹೆಸರೇ ಸೂಚಿಸುವಂತೆ ಇದರಲ್ಲಿ ಹೆಚ್ಚಿನ ಪೋಷಕಾಂಶಗಳು ಇರುತ್ತದೆ. ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಈ ಗಿಡವನ್ನು ಬೆಳೆಸಲು ನೀವು ಹೆಚ್ಚಿನ ಆರೈಕೆ ಮಾಡಬೇಕಾಗಿಲ್ಲ. ನೀರು ಗೊಬ್ಬರ ಉಣಬಡಿಸಬೇಕಿಲ್ಲ. ನಿಮ್ಮ ಹೂದೋಟದ ನಡುವೆಯೇ ಇದೊಂದು ಗಿಡವನ್ನು ನೆಟ್ಟುಕೊಳ್ಳಬಹುದು ಯಾಕೆಂದರೆ ಇದರಿಂದ ನೀವು ರುಚಿಕರವಾದ ಅಡುಗೆಯನ್ನು ಮಾಡಬಹುದು. ಈ ವಿಟಮಿನ್ ಸೊಪ್ಪನ್ನು ಚಕ್ರಮುನಿಚಕ್ರಮುನಿ ಸೊಪ್ಪು ಎಂದು ಸಹ ಕರೆಯುತ್ತಾರೆ. ಈ ಗಿಡದ ಸೊಪ್ಪು, ಚಿಗುರು ಮತ್ತು ಕಾಂಡ ಎಲ್ಲವನ್ನೂ ಬಳಸಿ ನೀವು ಅಡುಗೆ ಮಾಡಬಹುದು. ಇದರಿಂದ ಚಟ್ನಿ, ತಂಬುಳಿ ಹಾಗೂ ಪಲ್ಯವನ್ನು ತಯಾರಿಸಬಹುದು. == ಆರೋಗ್ಯ ಗುಣ == ರಕ್ತ ಹೀನತೆ ಇದ್ದವರಿಗೆ ಒಳ್ಳೆಯದು ಇದರಿಂದ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳಿವೆ ಈ ಸೊಪ್ಪು ರಕ್ತ ಹೀನತೆ ಇರುವವರಿಗೆ ತುಂಬಾ ಉಪಕಾರಿ ರಕ್ತಹೀನತೆ ರಕ್ತಹೀನತೆ ಇರುವವರು ಈ ಸೊಪ್ಪಿನ ಪದಾರ್ಥ ಗಳನ್ನು ಸೇವಿಸಿದರೆ ಅದರಲ್ಲೂ ವಿಶೇಷವಾಗಿ ಮಹಿಳೆಯರು ತಮ್ಮ ಮುಟ್ಟಿನ ದಿನದಲ್ಲಿ ಈ ಸೊಪ್ಪಿನ ಪದಾರ್ಥಗಳನ್ನ ಸೇವಿಸಬೇಕು ಯಾಕೆಂದರೆ ಇದು ರಕ್ತಹೀನತೆಯನ್ನು ಕಡಿಮೆ ಮಾಡುತ್ತದೆ ಇದರಲ್ಲಿ ಹಲವಾರು ರೀತಿಯ ಪೋಷಕಾಂಶಗಳಿರುವುದರಿಂದ ದೇಹಕ್ಕೆ ಇನ್ನಷ್ಟು ಬಲ ನೀಡುತ್ತದೆ ಜೀವಕೋಶಗಳ ಅಭಿವೃದ್ಧಿ ಹಾಗೂ ಸ್ನಾಯುವಿನಸ್ನಾಯು ರಚನೆಗೆ ಇದು ಸಹಾಯ == ಪಲ್ಯ ಮಾಡುವ ವಿಧಾನ == ಇದರಿಂದ ನೀವು ಪಲ್ಯವನ್ನು ತಯಾರಿಸಬಹುದು. ಪಲ್ಯ ಮಾಡುವ ವಿಧಾನ ಇಲ್ಲಿದೆ. ಮೊದಲಿಗೆ ವಿಟಮಿನ್ ಸೊಪ್ಪನ್ನು ತೆಗೆದುಕೊಳ್ಳಿ. ನಂತರ ಎಲೆಗಳನ್ನು ಬಿಡಿಸಿ ಹೆಚ್ಚಿಕೊಳ್ಳಿ. ನಂತರ ಬಂದು ಬಾಣಲೆಗೆ ಎಣ್ಣೆ, ಸಾಸಿವೆ, ಜೀರಿಗೆಜೀರಿಗೆ ಹಾಗೆ ಸ್ವಲ್ಪ ಅರಿಶಿನಅರಿಸಿನ ಹಾಕಿ ನಂತರ ಈರುಳ್ಳಿಈರುಳ್ಳಿ ಹಾಕಿ ಬಾಡಿಸಿಕೊಳ್ಳಿ. ಅದಾದ ಮೇಲೆ ಈ ಎಲ್ಲಾ ಸೊಪ್ಪುಗಳನ್ನು ಅದೇ ಬಾಣಲೆಗೆ ಹಾಕಿ ಚೆನ್ನಾಗಿ ಹುರಿದುಕೊಳ್ಳಿ. ಇದರ ಹಸಿ ವಾಸನೆ ಹೋಗುವವರೆಗೆ ಹುರಿದುಕೊಳ್ಳಬೇಕು. ನಂತರ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಸ್ವಲ್ಪೇ ಸ್ವಲ್ಪ ಸಕ್ಕರೆ ಹಾಕಿ. ಇದು ಬಾಡುತ್ತದೆ ಬಾಡಿದ ನಂತರ ನೀವು ಇದನ್ನು ಬಡಿಸಿಕೊಂಡು ತಿನ್ನಬಹುದು. == ಉಲ್ಲೇಖ ==